ರಾಮಲಿಂಗಾ ರೆಡ್ಡಿ ಬೆಂಗಳೂರಿನ ಬಿ ಟಿ ಎಂ ಕ್ಷೇತ್ರದಿಂದ ಸ್ಪರ್ಧೆ | Oneindia Kannada

2018-02-12 538

Home minister of Karnataka, Ramalinga Reddy is sitting MLA of the constituency. Who will win BTM Layout assembly constituency, Bengaluru?


ಬೆಂಗಳೂರು ನಗರದ ಪ್ರಮುಖ ವಿಧಾನಸಭಾ ಕ್ಷೇತ್ರ ಬಿಟಿಎಂ ಲೇಔಟ್. ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ಕ್ಷೇತ್ರದ ಶಾಸಕರು. 3ನೇ ಬಾರಿ ಕ್ಷೇತ್ರದಿಂದ ಅವರು ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಸೋಲಿಲ್ಲದ ಸರದಾರ ಎಂದೇ ಖ್ಯಾತಿ ಪಡೆದಿದ್ದಾರೆ ರಾಮಲಿಂಗಾ ರೆಡ್ಡಿ. ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕು ಬಾರಿ ಗೆದ್ದಿರುವ ಅವರು, ಕ್ಷೇತ್ರ ಪುನರ್ ವಿಂಗಡನೆ ಬಳಿಕ ಬಿಟಿಎಂ ಲೇಔಟ್ ಕ್ಷೇತ್ರ ಆಯ್ಕೆ ಮಾಡಿಕೊಂಡರು. ಅಲ್ಲಿಯೂ ಎರಡು ಬಾರಿ ಗೆದ್ದಿದ್ದಾರೆ.